ನಿಮಿಷಾ ಸಜಯನ್, ಒಬ್ಬ ಭಾರತೀಯ ನಟಿ. ಅವರು ಮರಾಠಿ ಮತ್ತು ಇಂಗ್ಲಿಷ್ ಭಾಷೆಯ ಚಲನಚಿತ್ರಗಳ ಜೊತೆಗೆ ಮಲಯಾಳಂ ಮತ್ತು ತಮಿಳು ಭಾಷೆಯ ಚಲನಚಿತ್ರಗಳಲ್ಲಿ ನಟಿಸುತ್ತಾರೆ. ದಿಲೀಶ್ ಪೋತನ್ ನಿರ್ದೇಶನದ ತೊಂಡಿಮುತಾಳುಂ ದೃಕ್ಷಾಕ್ಷಿಯುಂ ಚಿತ್ರದ ಮೂಲಕ ನಿಮಿಷಾ ತಮ್ಮ ನಟನಾ ವೃತ್ತಿಗೆ ಪಾದಾರ್ಪಣೆ ಮಾಡಿದರು. ಒರು ಕುಪ್ರಸಿಧ ಪಯ್ಯನ್ ಮತ್ತು ಚೋಳ ಚಿತ್ರಗಳಲ್ಲಿನ ಅವರ ಅಭಿನಯಕ್ಕಾಗಿ ೨೦೧೮ ರಲ್ಲಿ ಅತ್ಯುತ್ತಮ ನಟಿಗಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಅವರು ಎರಡು ಫಿಲ್ಮ್‌ಫೇರ್ ಪ್ರಶಸ್ತಿ ಸೌತ್ ಮತ್ತು ಮೂರು ಪ್ರಶಸ್ತಿಗಳನ್ನು ಸಹ ಪಡೆದಿದ್ದಾರೆ. == ಆರಂಭಿಕ ಮತ್ತು ವೈಯಕ್ತಿಕ ಜೀವನ == ನಿಮಿಷಾರವರು ಮುಂಬೈನಲ್ಲಿ ಇಂಜಿನಿಯರ್ ಆಗಿರುವ ಸಜಯನ್ ಮತ್ತು ಬಿಂದು ಸಜಯನ್ ದಂಪತಿಗೆ ಜನಿಸಿದರು, ಇಬ್ಬರೂ ಮೂಲತಃ ಕೇರಳದ ಕೊಲ್ಲಂ ಜಿಲ್ಲೆಯವರು. ಅವರ ತಾಯಿಯ ಪೂರ್ವಜರ ಮನೆ ಕೊಲ್ಲಂ ಜಿಲ್ಲೆಯ ಪುನಲೂರಿನಲ್ಲಿದೆ . ನಿಮಿಷಾ ಮುಂಬೈನ ಕಾರ್ಮೆಲ್ ಕಾನ್ವೆಂಟ್ ಶಾಲೆಯಲ್ಲಿ ವ್ಯಾಸಂಗ ಮಾಡಿದರು ಮತ್ತು ಮುಂಬೈನ ಕೆ.ಜೆ. ಸೋಮಯ್ಯ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. == ನಟನಾ ವೃತ್ತಿ == ದಿಲೀಶ್ ಪೋತನ್ ನಿರ್ದೇಶನದ ತೊಂಡಿಮುತಾಳುಂ ದೃಕ್ಷಾಕ್ಷಿಯುಂ ಚಿತ್ರದ ಮೂಲಕ ನಿಮಿಷಾ ತಮ್ಮ ನಟನಾ ವೃತ್ತಿಯನ್ನು ಆರಂಭಿಸಿದರು. ನಂತರ ಅವರು ಸಂಪಾದಕ ಬಿ. ಅಜಿತ್ಕ್ ಮತ್ತು ರಾಜೀವ್ ರವಿ ಅವರ ಈಡಾದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದರು. ಮಧುಪಾಲ್ ನಿರ್ದೇಶನದ ಒರು ಕುಪ್ರಸಿಧ ಪಯ್ಯನ್ ಮತ್ತು ಸನಲ್ ಕುಮಾರ್ ಶಶಿಧರನ್ ನಿರ್ದೇಶನದ ಚೋಳ ಚಿತ್ರಗಳಿಗಾಗಿ ಅವರು ೨೦೧೯ರಲ್ಲಿ ಅತ್ಯುತ್ತಮ ನಟನೆಗಾಗಿ ೪೯ ನೇ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಚೋಳ ಹಲವಾರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರಥಮ ಪ್ರದರ್ಶನ ಕಂಡಿತು. ೨೦೨೧ ರಲ್ಲಿ, ಅವರು ದಿ ಗ್ರೇಟ್ ಇಂಡಿಯನ್ ಕಿಚನ್ ನಲ್ಲಿ ನಟಿಸಿದರು. ಆ ಚಿತ್ರಕ್ಕೆ ಹಾಗೂ ಚಿತ್ರದಲ್ಲಿ ಅವರ ಅಭಿನಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅದೇ ವರ್ಷ, ಅವರು ನಯತ್ತು ಮತ್ತು ಮಲಿಕ್ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದರು. ೨೦೨೨ ರಲ್ಲಿ ಅವರು ಒರು ತೆಕ್ಕನ್ ಥಲ್ಲು ಕೇಸ್, ಇನ್ನಲೆ ವರೇ ಮತ್ತು ಹೆವೆನ್‌ನ ಭಾಗವಾಗಿದ್ದರು. ಅವರ ಮುಂಬರುವ ಚಿತ್ರಗಳು ತುರಮುಖಂ ಮತ್ತು ಚೇರಾ . ಅವರು ಎ‌ಎಲ್ ವಿಜಯ್ ಅವರ ಮಿಷನ್: ಅಧ್ಯಾಯ ೧ - ಅಚ್ಚಮ್ ಎನ್ಬತು ಇಲ್ಲೈಯೇ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆದರೆ ತಮಿಳಿನಲ್ಲಿ, ೨೦೨೩ ರಲ್ಲಿ ಬಿಡುಗಡೆಯಾದ ಚಿತ್ತಾ ಚಲನಚಿತ್ರ ಅವರ ಮೊದಲ ಬಿಡುಗಡೆಯಾದ ತಮಿಳು ಚಲನಚಿತ್ರವಾಗಿತ್ತು. == ಚಿತ್ರಜೀವನ == === ಚಲನಚಿತ್ರಗಳು === == ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು == == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ ಸಜಯನ್ ನಿಮಿಷಾ ಸಜಯನ್ ಫೇಸ್‌ಬುಕ್‌ನಲ್ಲಿ